/newsfirstlive-kannada/media/post_attachments/wp-content/uploads/2024/05/prajwal-revanna-1-1.jpg)
ಹಾಸನ ಅಶ್ಲೀಲ ವಿಡಿಯೋಗೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಅರೆಸ್ಟ್ ಆಗಿದ್ದಾರೆ. 34 ದಿನಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಬೆಂಗಳೂರು ಏರ್ಪೋರ್ಟ್ಗೆ ಬಂದಿಳಿದಂತೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಅಚ್ಚರಿ ಸಂಗತಿ ಎಂದರೆ ಮಹಿಳಾ ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ಅವರನ್ನ ಬಂಧಿಸಿದ್ದಾರೆ.
ಮಧ್ಯರಾತ್ರಿ 12;30ರ ಸುಮಾರಿಗೆ ಅವರನ್ನು ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣನವರನ್ನು ಅರೆಸ್ಟ್ ಮಾಡಿದ್ದಾರೆ. ಕೆಂಪೇಗೌಡ ಏರ್ಪೋರ್ಟ್ಗೆ ಬಂದು ಇಳಿದಂತೆ ಸುಮನ್ ಕರ್ನೇಕರ್ ಅವರ ಟೀಂ ಅವರನ್ನು ಬಂಧಿಸಿದ್ದಾರೆ. ನಾಲ್ಕೈದು ಮಹಿಳಾ ಅಧಿಕಾರಿಗಳು ಪ್ರಜ್ವಲ್ ಅವರನ್ನು ಬಂಧಿಸಿ ಎಸ್ಐಟಿ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಪ್ರಜ್ವಲ್ ಅವರನ್ನು ಅರೆಸ್ಟ್ ಮಾಡಲು ಮಹಿಳಾ ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು.
ಇದನ್ನೂ ಓದಿ: 34 ದಿನಗಳ ಬಳಿಕ ಪ್ರಜ್ವಲ್ ರಿಟರ್ನ್.. ಏರ್ಪೋರ್ಟ್ನಲ್ಲಿ ವಶಕ್ಕೆ ಪಡೆದ SIT ಮೊದಲು ಮಾಡಿದ್ದೇ ಈ ಕೆಲಸ!
SIT ಮಹಿಳಾ ಅಧಿಕಾರಿಗಳ ಸ್ಟ್ರಾಂಗ್ ಟೀಮ್ ಪ್ರಜ್ವಲ್ ರೇವಣ್ಣನ ಅರೆಸ್ಟ್ ಮಾಡಿ SIT ಆಫೀಸ್ಗೆ ಕರೆತಂದಿದೆ. ಮಹಿಳಾ ಅಧಿಕಾರಿಗಳೇ ಪ್ರಜ್ವಲ್ ರೇವಣ್ಣನ ಅರೆಸ್ಟ್ ಮಾಡಿದ್ಯಾಕೆ?#PrajwalRevanna#SITOffice#SIT#HassanPendriveCase#KIAL#NewsFirstKannadapic.twitter.com/RPS280HGe6
— NewsFirst Kannada (@NewsFirstKan)
SIT ಮಹಿಳಾ ಅಧಿಕಾರಿಗಳ ಸ್ಟ್ರಾಂಗ್ ಟೀಮ್ ಪ್ರಜ್ವಲ್ ರೇವಣ್ಣನ ಅರೆಸ್ಟ್ ಮಾಡಿ SIT ಆಫೀಸ್ಗೆ ಕರೆತಂದಿದೆ. ಮಹಿಳಾ ಅಧಿಕಾರಿಗಳೇ ಪ್ರಜ್ವಲ್ ರೇವಣ್ಣನ ಅರೆಸ್ಟ್ ಮಾಡಿದ್ಯಾಕೆ?#PrajwalRevanna#SITOffice#SIT#HassanPendriveCase#KIAL#NewsFirstKannadapic.twitter.com/RPS280HGe6
— NewsFirst Kannada (@NewsFirstKan) May 30, 2024
">May 30, 2024
ಮಹಿಳಾ ಅಧಿಕಾರಿಗಳಿಂದ ಪ್ರಜ್ವಲ್ ಅರೆಸ್ಟ್?
ಅತ್ಯಾಚಾರ ಆರೋಪ ಪ್ರಕರಣವಾಗಿದ್ದರಿಂದ. ಈ ಪ್ರಕರಣದ ಕುರಿತು ಸಂತ್ರಸ್ತೆಯರು ಮುಜುಗರಕ್ಕೆ ಒಳಗಾಗಬಾರದು ಎಂಬ ಕಾರಣಕ್ಕೆ ಮಹಿಳಾ ತಂಡವನ್ನು ಅಧಿಕಾರಿಗಳು ನೇಮಿಸುತ್ತಾರೆ. ಅದರಂತೆ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧಿಸಿದಂತೆ ಮಹಿಳಾ ತಂಡವನ್ನು ರಚಿಸಲಾಗಿತ್ತು. ಹಾಗಾಗಿ ಬೆಂಗಳೂರು ಏರ್ಪೋರ್ಟ್ಗೆ ಬಂದ ಪ್ರಜ್ವಲ್ ರೇವಣ್ಣನವರನ್ನು ಸುಮನ್ ಕರ್ನೇಕರ್ ಅವರ ತಂಡ ಅರೆಸ್ಟ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ